ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ (ಪಾಸ್) ಮುಖ್ಯಸ್ಥ ಹಾರ್ದಿಕ್ ಪಟೇಲ್ ನಿಯೋಗ ಮತ್ತು ಕಾಂಗ್ರೆಸ್ ನಿಯೋಗದ ನಡುವೆ ಬುಧವಾರ ಮಹತ್ವದ ಮಾತುಕತೆ ನಡೆದಿದೆ. ಈ ವೇಳೆ ಹಾರ್ದಿಕ್ ಪಟೇಲ್ ನೇತೃತ್ವದ ನಿಯೋಗಕ್ಕೆ ಕಾಂಗ್ರೆಸ್ ಮೂರು ಆಯ್ಕೆಗಳನ್ನು ನೀಡಿದೆ.ಮೀಸಲಾತಿ ಬೇಡಿಕೆ ಸಂಬಂಧ ಕಾಂಗ್ರೆಸ್ ನೀಡಿರುವ ಆಯ್ಕೆಯನ್ನು ತಮ್ಮ ನಾಯಕರು ಮತ್ತು ಕಾನೂನು ತಜ್ಞರ ಜತೆ ಸಮಾಲೋಚನೆ ಮಾಡಿ ನಿರ್ಧರಿಸುವುದಾಗಿ ಹಾರ್ದಿಕ್ ಪಟೇಲ್ ಬಣದವರು ಹೇಳಿದ್ದಾರೆ. ರಾತ್ರಿ 11.30ರಿಂದ 2 ಗಂಟೆವರಗೆ ನಡೆದ ಸಭೆಯಲ್ಲಿ ಮೂರು ಆಯ್ಕೆಗಳನ್ನು ನೀಡಲಾಗಿದೆ. ಸಭೆಯ ನಂತರ ಮಾಡನಾಡಿದ ಪಾಸ್ ಸಂಚಾಲಕ ದಿನೇಶ್ ಬಂಭಾನಿಯಾ, "ಶೈಕ್ಷಣಿಕ ಸಂಸ್ಥೆಗಳು ಮತ್ತು ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡುವ ಸಂಬಂಧ ನಮಗೆ ಕಾಂಗ್ರೆಸ್ ಪಕ್ಷ ಮೂರು ಆಯ್ಕೆಗಳನ್ನು ನೀಡಿದೆ," ಎಂದಿದ್ದಾರೆ. ಮುಂದಿನ ಎರಡು ಮೂರು ದಿನಗಳಲ್ಲಿ ನಾವು ಮತ್ತೆ ಭೇಟಿಯಾಗಲಿದ್ದೇವೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ. ಎರಡು ಮೂರು ದಿನದಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳಲಿದೆ ಎಂದು ಅವರು ಹೇಳಿದ್ದಾರೆ.
congress has given 3 options to hardhik patel. PAS and congress had a meeting this wednesday and things are still not clear